**11/06/2021 (gk prachalit)

gkprachalit.blogspot.com
11/06/2021



GK TODAY GnA
11/06/2021

1.What is the expansion of CDN, with reference to the recent Global Internet outage?
ಇತ್ತೀಚಿನ ಜಾಗತಿಕ ಇಂಟರ್ನೆಟ್ ನಿಲುಗಡೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ CDN ವಿಸ್ತೃತ ರೂಪ ಯಾವುದು?

[A] Computerised Delivery Network
[B] Content Delivery Network .
[C] Chip Delivery Network
[D] Computer Data Network


2.United Nations has warned of Mass Deaths in ‘Kayah’ state, located in which country?
ಯುನೈಟೆಡ್ ನೇಷನ್ಸ್ ಯಾವ ದೇಶದಲ್ಲಿ ನೆಲೆಗೊಂಡಿರುವ ‘ಕಾಯಾ’ ರಾಜ್ಯದಲ್ಲಿ ಸಾಮೂಹಿಕ ಸಾವಿನ ಬಗ್ಗೆ ಎಚ್ಚರಿಕೆ ನೀಡಿದೆ?

[A] Sudan
[B] Myanmar
[C] Bangladesh
[D] Afghanistan


3.Which is the first country to formally adopt ‘Bitcoin’ as legal tender?
ಔಪಚಾರಿಕವಾಗಿ ‘ಬಿಟ್‌ಕಾಯಿನ್’ ಅನ್ನು ಕಾನೂನು ಟೆಂಡರ್ ಆಗಿ ಸ್ವೀಕರಿಸಿದ ಮೊದಲ ದೇಶ ಯಾವುದು?

[A] Switzerland
[B] El Salvador .
[C] Venezuela
[D] Italy


4.Mount Eko Dumbing, which was making news recently, is located in which state?
ಇತ್ತೀಚೆಗೆ ಸುದ್ದಿಯಲ್ಲಿರುವ ಮೌಂಟ್ ಎಕೊ ಡಂಬಿಂಗ್ ಯಾವ ರಾಜ್ಯದಲ್ಲಿದೆ?

[A] Uttarakhand
[B] Sikkim 
[C] Arunachal Pradesh .
[D] Himachal Pradesh


5.The minimum support prices (MSP) of paddy, sesamum, tur and urad were hiked recently. These are ……… crops.
ಭತ್ತ, ಸೆಸಮಮ್, ತುರ್ ಮತ್ತು ಉರಾದ್‌ನ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್‌ಪಿ) ಇತ್ತೀಚೆಗೆ ಹೆಚ್ಚಿಸಲಾಗಿದೆ. ಇವು ಯಾವ ರೀತಿಯ ಬೆಳೆಗಳು?

[A] Rabi
[B] Kharif .
[C] Zaid
[D] None of the above


**********************************

ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲ
===================
ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ(67) ಚಿಕಿತ್ಸೆ ಫಲಕಾರಿಯಾಗದೇ, ಸಾವನ್ನಪ್ಪಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತೆ ಆಗಿದೆ.
=====================
👉 ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಬದುಕಿನ ಹಿನ್ನೋಟ
===============
ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದವರು.
=================
👉 ಜನನ, ಜೀವನ
============
ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ‘ಮಾಗಡಿ’ ತಾಲ್ಲೋಕಿನ ‘ಮಂಚನಬೆಲೆ’ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
===========
👉 ಕೃತಿಗಳು
- ಪಿ.ಎಚ್ ಡಿ ಸಂಶೋಧನಾಪ್ರಬಂಧ – ಗ್ರಾಮ ದೇವತೆಗಳು, 1997
=============
👉 ಕವನ ಸಂಕಲನಗಳು
================
- ಹೊಲೆ ಮಾದಿಗರ ಹಾಡು, 1975
- ಮೆರವಣಿಗೆ, 2000
- ಸಾವಿರಾರು ನದಿಗಳು, 1979
- ಕಪ್ಪು ಕಾಡಿನ ಹಾಡು, 1983
- ಆಯ್ದಕವಿತೆಗಳು, 1997
- ಅಲ್ಲೆಕುಂತವರೆ
- ನನ್ನ ಜನಗಳು ಮತ್ತು ಇತರ ಕವಿತೆಗಳು, 2005
- ಸಮಕಾಲೀನ ಕನ್ನಡ ಕವಿತೆ ಭಾಗ-3, 4 (ಸಂಪಾದನೆ ಇತರರೊಂದಿಗೆ), 2003
===================
👉 ವಿಮರ್ಶನಾ ಕೃತಿಗಳು
=============
- ಹಕ್ಕಿ ನೋಟ, 1991
- ರಸಗಳಿಗೆಗಳು
- ಎಡಬಲ
- ಉರಿಕಂಡಾಯ, 2009
=============
👉 ಲೇಖನಗಳ ಸಂಕಲನ
============
- ಅವತಾರಗಳು, 1991
- ಸದನದಲ್ಲಿ ಸಿದ್ದಲಿಂಗಯ್ಯ ಭಾಗ -1, 1996
- ಸದನದಲ್ಲಿ ಸಿದ್ದಲಿಂಗಯ್ಯ ಭಾಗ -2, 2004
- ಜನಸಂಸ್ಕೃತಿ, 2007
==============
👉 ನಾಟಕಗಳು
===========
- ಏಕಲವ್ಯ, 1986
- ನೆಲಸಮ, 1980
- ಪಂಚಮ, 1980
=========
👉 ಆತ್ಮಕಥೆ
===========
- ಊರುಕೇರಿ- ಭಾಗ-1, 1997
- ಊರುಕೇರಿ- ಭಾಗ-2, 2006
===========
🌷ಗೌರವ, ಪ್ರಶಸ್ತಿಗಳು
===============
- ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-1984
- ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-1986
- ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -1992
- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -1996
- ಜಾನಪದ ತಜ್ಞ ಪ್ರಶಸ್ತಿ -2001
- 2 ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ.
- ಸಂದೇಶ್ ಪ್ರಶಸ್ತಿ -2001
- ಡಾ.ಅಂಬೇಡ್ಕರ್ ಪ್ರಶಸ್ತಿ -2002
- ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -2002
- ಬಾಬುಜಗಜೀವನರಾಮ್ ಪ್ರಶಸ್ತಿ -2005
- ನಾಡೋಜ ಪ್ರಶಸ್ತಿ -2007
- ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -2012
- ಆಳ್ವಾಸ್ ನುಡಿಸಿರಿ ಪ್ರಶಸ್ತಿ -2012
- ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
- ನೃಪತುಂಗ ಪ್ರಶಸ್ತಿ -2018
- ಪಂಪ ಪ್ರಶಸ್ತಿ – 2019

Comments

RECENT