** ವಿಶ್ವಸಂಸ್ಥೆಯಲ್ಲಿ ಭಾರತ ಯಾವ ಕಾರಣಕ್ಕಾಗಿ ಸಂಪೂರ್ಣವಾಗಿ ಇಸ್ರೇಲ್ ನ ಪರ ವಹಿಸಲಿಲ್ಲ?

** ವಿಶ್ವಸಂಸ್ಥೆಯಲ್ಲಿ ಭಾರತ ಯಾವ ಕಾರಣಕ್ಕಾಗಿ ಸಂಪೂರ್ಣವಾಗಿ ಇಸ್ರೇಲ್ ನ ಪರ ವಹಿಸಲಿಲ್ಲ?(ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಬಿಕ್ಕಟ್ಟು
why did India did not give the full support to Israel in UNO?


***********************************


** ಪ್ರಾರಂಭದಲ್ಲಿ ಪ್ಯಾಲೆಸ್ಟೇನ್ ಎಂಬ ದೇಶದಲ್ಲಿ ಯಹೂದಿಗಳು ವಾಸಿಸುತ್ತಿದ್ದರು. ಇದರರ್ಥ ಅವರು ವಾಸಿಸಿದ್ದು ಅವರ ದೇಶವಲ್ಲ. ಮುಂದೆ ಜಾಗತಿಕ ಮಟ್ಟದಲ್ಲಿ ಯಹೂದಿಗಳು ವಾಸಿಸುತ್ತಿರುವ ಪ್ಯಾಲೆಸ್ಟೇನಿನ ಆ ಪ್ರದೇಶವನ್ನು ಇಸ್ರೇಲ್ ಎಂಬ ದೇಶವನ್ನಾಗಿ ಘೋಷಿಸಲಾಯಿತು. ಆದರೆ ಇಸ್ರೇಲ್ ಜನರು ಅದೇ ಪ್ಯಾಲೆಸ್ಟೀನ್ ಪ್ರದೇಶವನ್ನು 1947, 1948-1967 & 2011 ರಲ್ಲಿ ಆಕ್ರಮಣ ಮಾಡಿ ಅನೇಕ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ. 




* ಅಟಲ್ ಬಿಹಾರಿ ವಾಜಪೇಯಿ ಅವರ ಹಳೆಯ ನಿಲುವಿನಂತೆ ಪ್ರಧಾನಿ ಮೋದಿಯವರು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷದಲ್ಲಿ ಪ್ಯಾಲೆಸ್ಟೇನ್ ಪರ ನಿಲ್ಲುವುದಾಗಿ ವಿದೇಶಾಂಗ ರಾಯಭಾರಿಯೊಂದಿಗೆ ವಿಶ್ವಸಂಸ್ಥೆಯಲ್ಲಿ ಅಂತಿಮ ನಿರ್ಣಯ ಸೂಚಿಸಿದ್ದಾರೆ.




** ಇಸ್ರೇಲ್ , ಭಾರತದಕ್ಕೆ ರೇಡಾರ್ ಸಿಸ್ಟಮ್ ಸೇರಿದಂತೆ ಬಹಳ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಒದಗಿಸಿದೆ‌. ಭಾರತದ ಕಾರ್ಗಿಲ್ ಯುದ್ಧದಲ್ಲಿಯು ಇಸ್ರೇಲ್ ಮಹತ್ವದ ಪಾತ್ರ ವಹಿಸಿತ್ತು.


** ಪಾಕಿಸ್ತಾನ ಚೀನಾ ಮತ್ತು ಇತರ ಮಧ್ಯಪ್ರಾಚ್ಯ ಮುಸ್ಲಿಂ ರಾಷ್ಟ್ರಗಳ ಎಲ್ಲವೂ ಪ್ಯಾಲೆಸ್ತೇನಿನ "ಗಾಜಾ" ಪಟ್ಟಿಯಲ್ಲಿರುವ ಹಮಾಸ್ ಉಗ್ರ ಪಡೆಯನ್ನು ಉಗ್ರರು ಎಂದು ಪರಿಗಣಿಸುವುದಿಲ್ಲ, ಇದಕ್ಕೆ ಕಾರಣ ಆಂತರಿಕ ರಾಜಕೀಯ ಬಿಕ್ಕಟ್ಟುಗಳು ಹಾಗೂ ಮಹತ್ವಾಕಾಂಕ್ಷೆಗಳು.


(ಚೀನಾದ ಮಹತ್ವಕಾಂಕ್ಷೆ)
** ಭಾರತ ಪ್ಯಾಲೇಸ್ತೀನ್ ಪರ ವಹಿಸುವುದರ ಮೂಲಕ ಮುಸ್ಲಿಂ ರಾಷ್ಟ್ರಗಳ ಒಕ್ಕೂಟದ (OIC) ದೊಂದಿಗೆ ಉತ್ತಮ ಸಂಬಂಧ ಹೊಂದುತ್ತದೆ. ಇದೇ ಸಂದರ್ಭವನ್ನು Asia ಮಟ್ಟದಲ್ಲಿ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳಲು ಚೀನಾ ಕೂಡ ಇಸ್ರೇಲ್ ಮೇಲೆ ಒತ್ತಡವನ್ನು ಹೇರಿ ಮುಸ್ಲಿಂ ರಾಷ್ಟ್ರಗಳ ಗಮನ ಸೆಳೆಯುವುದರಲ್ಲಿ ಮುಂದಾಗುತ್ತಿದೆ.


(ರಷ್ಯಾದ ನಿಲುವು)
** ಈ ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಲ್ಲಿ ರಷ್ಯಾ ಕೂಡ ಉತ್ತಮ ನಿಲುವನ್ನು ವ್ಯಕ್ತ ಪಡಿಸಿದೆ. ಇಸ್ರೇಲಿಗೆ ನೌಕಾಪಡೆ, ಭೂಸೇನೆ, ವಾಯುಪಡೆಯನ್ನು ಹೊಂದುವ ಅಧಿಕಾರವಿದೆ ಆದರೆ ಇದಕ್ಕೆ ವಿರೋಧವಾಗಿ ದೇಶವನ್ನು ರಕ್ಷಿಸುವುದಕ್ಕಾಗಿ ಪ್ಯಾಲೆಸ್ಟೇನ್ ಗೆ ಯಾವುದೇ ಅಧಿಕಾರವಿಲ್ಲ ಎಂಬುವುದನ್ನು ಸ್ಪಷ್ಟವಾಗಿ ಸೂಚಿಸಿರುವ ರಷ್ಯಾ ಎರಡು ದೇಶಗಳು ರಕ್ಷಣಾ ಕ್ಷೇತ್ರದಲ್ಲಿ ತಮ್ಮ ತಮ್ಮ ದೇಶವನ್ನು ರಕ್ಷಿಸಿ ಕೊಳ್ಳುವುದರಲ್ಲಿ ಸಾಮರ್ಥ್ಯವನ್ನು ಬಲಪಡಿಸಿ ಕೊಳ್ಳಬಹುದು ಎಂದು ತೀರ್ಮಾನ ನೀಡಿದೆ.




(ಭಾರತ ಪಾಕಿಸ್ತಾನ ಮತ್ತು ಚೀನಾ)
** ಈ ಸಂದರ್ಭದಲ್ಲಿ ನಾವು ಇಸ್ರೇಲಿಗೆ ಬೆಂಬಲ ಸೂಚಿಸುವುದು ಇಸ್ರೇಲ್ ಆಕ್ರಮಿಸಿದ ಪ್ರವೇಶವನ್ನು ಇಸ್ರೇಲಿಗೆ ಸೇರಿಸಬೇಕು ಎಂದು ವಾದಿಸುವುದು ಎರಡು ಒಂದೇ. ಈ ರೀತಿಯ ನಿಲುವನ್ನು ವ್ಯಕ್ತಪಡಿಸಿದಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿರುವ ಭಾರತ ಮತ್ತು ಪಾಕಿಸ್ತಾನ , ಭಾರತ ಮತ್ತು ಚೀನಾ ಗಡಿ ವಿವಾದದಲ್ಲಿ ಪಾಕಿಸ್ತಾನ ಮತ್ತು ಚೀನಾ ಆಕ್ರಮಿಸಿದ ಭಾರತದ ಭೂಭಾಗವು ಚೀನಾಕ್ಕೆ ಮತ್ತು ಪಾಕಿಸ್ತಾನಕ್ಕೆ ಸೇರಬೇಕೆಂದು ಚೀನಾ ಮತ್ತು ಪಾಕಿಸ್ತಾನಗಳು ಭಾರತದ ನಿಲುವನ್ನು ಪ್ರಶ್ನಿಸಿ ವಾದಿಸುವುದುಂಟು. ಆದ್ದರಿಂದ ಇಸ್ರೇಲ್ ಆಕ್ರಮಿಸಿದ ಪ್ರದೇಶಗಳನ್ನು ಇಸ್ರೇಲಿಗೆ ಸೇರಬೇಕೆಂದು ಭಾರತ ಎಂದು ವಾದಿಸುವುದಿಲ್ಲ. ಹಾಗೆಯೆ ಇಸ್ರೇಲ್ ನ ಪರ ವಹಿಸುವುದು ಇಲ್ಲ. 




** ಇಸ್ರೇಲ್ ನೊಂದಿಗೆ ಭಾರತ ನಿಲ್ಲಲು ಸಾಧ್ಯವಾಗದೇ ಇರುವ ಇನ್ನೊಂದು ಮುಖ್ಯ ಕಾರಣವೆಂದರೆ ವಿಶ್ವಸಂಸ್ಥೆಯಲ್ಲಿರುವ ವಿಟೋ ಅಧಿಕಾರ. ವಿಟೋ ಅಧಿಕಾರದ ಬಲವನ್ನು ಪಡೆಯಬೇಕಾದರೆ ವಿಶ್ವಸಂಸ್ಥೆಯ ಒಟ್ಟು 193 ದೇಶಗಳಲ್ಲಿ 130 ದೇಶಗಳ ಬೆಂಬಲವನ್ನು ಪಡೆಯಬೇಕು. ನಾವು ಸದ್ಯ ಇಸ್ರೇಲ್ನ ಪರ ವಹಿಸಿದರೆ ಪ್ಯಾಲೆಸ್ಟೈನ್ ನೊಂದಿಗೆ ಪರವಹಿಸಿ ನಿಂತಿರುವ Organisation of Islamic Cooperation (OIC) ನಲ್ಲಿರುವ 57 ದೇಶಗಳು ಭಾರತದ ವಿರೋಧವಾಗಿ ನಿಲ್ಲುವ ಸಾಧ್ಯತೆ ಇದೆ. ಇದರಿಂದ ನಾವು ವಿಟೋ ಅಧಿಕಾರವನ್ನು ಪಡೆದುಕೊಳ್ಳುವುದರಲ್ಲಿ ವಿಫಲತೆಯನ್ನು ಕಾಣಬಹುದು. 




** ಇನ್ನೊಂದು ಮುಖ್ಯ ಕಾರಣವೆಂದರೆ ಭಾರತದ ಅಂತರಾಷ್ಟ್ರೀಯ ವ್ಯಾಪಾರ. ಭಾರತದ ಒಟ್ಟು ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಇಸ್ರೇಲ್ನ ಪಾತ್ರ ಕೇವಲ 1% ಮಾತ್ರ. ಆದರೆ ಪ್ಯಾಲೆಸ್ಟೇನ್ ನೊಂದಿಗೆ ನಿಂತಿರುವ ಇನ್ನುಳಿದ ಅರಬ್ ದೇಶಗಳೊಂದಿಗೆ(OIC) 18 % ವ್ಯಾಪಾರವನ್ನು ಹೊಂದಿದ್ದೇವೆ. ಇಂಧನ ವ್ಯಾಪಾರವು ಅರಬ್ ದೇಶಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ನಿರ್ವಹಿಸಲ್ಪಟ್ಟಿದೆ. ಇಸ್ರೇಲ್ ಪರ ವಹಿಸುವುದರ ಮೂಲಕ ಭಾರತದ ಬಹುಪಾಲು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ನಷ್ಟವನ್ನು ತಂದುಕೊಳ್ಳುವ ಸಾಧ್ಯತೆ ಇದೆ. 


** ಇನ್ನೊಂದು ಪ್ರಮುಖ ಅಂಶವೆಂದರೆ ಪ್ಯಾಲೆಸ್ಟೇನ್ ಮತ್ತು ಇಸ್ರೇಲ್ ನ ಸಂಘರ್ಷದಲ್ಲಿ ಇಸ್ಲಾಂ ಆರ್ಗನೈಜೆಶನ್ ದೇಶಗಳೊಂದಿಗೆ ಭಾರತ ಸಹಕರಿಸುವುದರ ಮೂಲಕ ಈಗಾಗಲೇ ಇಸ್ಲಾಮಿಕ್ ಆರ್ಗಣಿಸೇಶನ್ ದೇಶಗಳು ಪಾಕಿಸ್ತಾನದ ಮೇಲೆ ಹೇರಿರುವ ಪಾರದರ್ಶಕ ಒತ್ತಡಗಳನ್ನು ಮುಂದುವರಿಸಬಹುದು. (ರಿಟರ್ನಿಂಗ್ ದ ಲೋನ್ ಫ್ರಮ್ ಪಾಕಿಸ್ತಾನ ಬಾಯ್ ಮುಸ್ಲಿಂ ಕಂಟ್ರೀಸ್ (OIC), ಸಿಟಿಜನ್ ಶಿಪ್ ಅಮೆಂಡ್ಮೆಂಟ್)





** ಇನ್ನೊಂದು ಮುಖ್ಯ ಕಾರಣವೆಂದರೆ ಭಾರತದ ಅಖಂಡ ಭಾರತದ ಕನಸಿನಂತೆ ಪ್ಯಾಲಿಸ್ತಿನ ಕೂಡ ತನ್ನ ಅಸ್ತಿತ್ವವನ್ನು ಇಸ್ರೇಲ್ನ ಎದುರಿಗೆ ಬಲಪಡಿಸಿಕೊಳ್ಳಲು ನಿರ್ಧರಿಸುವುದಾಗಿದೆ. ಭಾರತ ಮತ್ತು ಪ್ಯಾಲೆಸ್ಟೇನ್ ಪರಿಸ್ಥಿತಿಗಳು ಸೂಕ್ಷ್ಮವಾಗಿ ಗಮನಿಸಿದರೆ ಒಂದೇ ರೀತಿಯಲ್ಲಿವೆ. ಹೇಗೆಂದರೆ 1947 ರಲ್ಲಿ 100% ಭೂಭಾಗ ಬಂದಿದ್ದ ಸಂಪೂರ್ಣ ಪ್ಯಾಲೆಸ್ಟೀನ್, ಇಸ್ರೇಲ್ ಆಕ್ರಮಣಕ್ಕೆ ಒಳಗಾಗಿ 2011ರ ವೇಳೆಗೆ ಕೇವಲ 12% ಭೂ ಭಾಗವನ್ನಷ್ಟೇ ಒಳಗೊಂಡಿದೆ. ಅಖಂಡ ಭಾರತ ಒಡೆದು ಹೋದ ಪರಿಸ್ಥಿತಿಯು ಇದೇ ರೀತಿಯಲ್ಲಿ ಇತ್ತು. 1876 ರಲ್ಲಿ ಅಪಘಾನಿಸ್ತಾನ, 1904ರಲ್ಲಿ ನೇಪಾಳ, 1906 ರಲ್ಲಿ ಭೂತಾನ್, 1907 ರಲ್ಲಿ ಟಿಬೆಟ್, 1935 ರಲ್ಲಿ ಶ್ರೀಲಂಕಾ & ಮಯನ್ಮಾರ್, 1947 ರಲ್ಲಿ ಪಾಕಿಸ್ತಾನ & ಬಾಂಗ್ಲಾದೇಶ ಹೀಗೆ ಎಲ್ಲಾ ದೇಶಗಳು ಭಾರತದಿಂದಲೂ ಬೇರ್ಪಟ್ಟಿವೆ. ಸೋಜಿಗದ ಸಂಗತಿಯೆಂದರೆ ಭಾರತ ಮತ್ತು ಪ್ಯಾಲೇಸ್ತೀನಿನ ಈ ಪರಿಸ್ಥಿತಿಗೆ ಕಾರಣವಾದ ಇಂಗ್ಲೆಂಡ್ ದೇಶವು ಮೌನವಾಗಿರುವುದಾಗಿದೆ. ಭಾರದೊಂದಿಗೆ ಇರುವ ಭಾವನಾತ್ಮಕ ಅಖಂಡ ಭಾರತದ ಕನಸಿನಂತೆ ಕೂಡ ಪ್ಯಾಲೆಸ್ಟೈನ್ ದೇಶದ ಅಸ್ತಿತ್ವವು ಇರುವುದು ಭಾರತದ ನಿಲುವಿಗೆ ಕಾರಣವಾಗಿದೆ. 


** ಭಾರತವು ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿರುವುದರಿಂದ ಅನೇಕ ಕಾರಣಗಳಿಂದ ಇಸ್ರೇಲ್ನ ವಿರೋಧವಾಗಿ ನಿಲ್ಲುವ(ಪೂರ್ತಿ ಬೆಂಬಲವನ್ನು ಕೊಡದೆ ಇರುವ) ಪರಿಸ್ಥಿತಿ ಬಂದೊದಗಿದೆ ಎಂದು ಇಸ್ರೇಲ್ ನೊಂದಿಗೆ ಭಾರತದ ವಿದೇಶಾಂಗ ಸಚಿವಾಲಯ ಸಮಾಲೋಚಿಸಿ ನಿರ್ಧಾರವನ್ನು ತೆಗೆದುಕೊಂಡಿದೆ. 


** ಭಾರತ ಸದ್ಯ ಜನೆವಾ ಕನ್ವೆನ್ಷನ್, ಅಂತರಾಷ್ಟ್ರೀಯ ವ್ಯಾಪಾರ, ಅಂತರರಾಷ್ಟ್ರೀಯ ನ್ಯಾಯಾಲಯ, ವಿಶ್ವಸಂಸ್ಥೆ ಮುಂತಾದ ಎಲ್ಲಾ ಆಯಾಮಗಳಲ್ಲಿಯು ಆಲೋಚಿಸಿ ನಿರ್ಧಾರ ತೆಗೆದುಕೊಂಡಿದ್ದು ಉತ್ತಮ ರೀತಿಯ ನಿರ್ಧಾರವಾಗಿದೆ


** ಪೂರ್ತಿ ಪ್ರದೇಶ ಇಸ್ರೇಲಿಗೆ ಸೇರಬೇಕೆಂದು ಇಸ್ರೇಲ್ನ ವಾದ ವಾಗಿದ್ದರೆ, ಪೂರ್ತಿ ದೇಶ ಪ್ಯಾಲೇಸ್ ಗೆ ಸೇರಬೇಕು ಎನ್ನುವುದು ಪ್ಯಾಲಿಸ್ಟೈನ್ ನ ವಾದ. ಸೂಕ್ಷ್ಮವಾಗಿ ಗಮನಿಸಿದರೆ ಎರಡು ದೇಶಗಳ ಮಹತ್ವಾಕಾಂಕ್ಷೆಗಳು ತಪ್ಪಾಗಿವೆ. ಭಾರತವು ಈ ಸಂದರ್ಭದಲ್ಲಿ ಬಹಳ ಜಾಗರೂಕತೆಯಿಂದ ಯೋಚಿಸಿ ಪ್ಯಾಲೆಸ್ಟೇನ್ ಹಾಗೂ ಇಸ್ರೇಲ್ ನೊಂದಿಗೆ ಸಮಾನ ಅಂತರದಲ್ಲಿ ಪರವಹಿಸಿ ಉತ್ತಮ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವ ನಿರ್ಧಾರವನ್ನು ಕೈಗೊಂಡಿದೆ.

Comments

RECENT