ಇಸ್ರೇಲ್ ಮತ್ತು ಪ್ಯಾಲೇಸ್ತೀನಿ ನಡುವಿನ ಯುದ್ಧ ಕೊನೆಗೊಂಡಿತೆ?

ಇಸ್ರೇಲ್ ಮತ್ತು ಪ್ಯಾಲೇಸ್ತೀನಿ ನಡುವಿನ ಯುದ್ಧ ಕೊನೆಗೊಂಡಿತೆ?


***********************************

*ಇಸ್ರೇಲ್ ಮತ್ತು ಪ್ಯಾಲೇಸ್ತೀನಿ ನಡುವಿನ ಯುದ್ಧ ಕೊನೆಗೊಂಡಿತೆ?
** ceasefire ಎಂದರೇನು?
(ಕದನ ವಿರಾಮ)
ಇದು ಯುದ್ಧದ ತಾತ್ಕಾಲಿಕ ನಿಲುಗಡೆಯಾಗಿದ್ದು, ಇದರಲ್ಲಿ ಆಕ್ರಮಣಕಾರಿ ಕ್ರಮಗಳನ್ನು ಸ್ಥಗಿತಗೊಳಿಸಲು ಎರಡು ಕಡೆಯಿಂದ ಒಪ್ಪಂದಕ್ಕೆ ಬದ್ಧವಾಗಿರುವುದಾಗಿರುವುದಾಗಿರುತ್ತದೆ. ಸದ್ಯ ಅನೇಕ ಒತ್ತಡಗಳಿಗೆ ಮಣಿದು ಇಸ್ರೇಲ್ ಹಾಗೂ ಹಮಾಸ್ ನಡುವೆ ಸೀಸ್ ಫಯರ್ ಅಂದರೆ ಕದನ ವಿರಾಮ ಘೋಷಣೆಯಾಗಿದೆ.




** ceasefire ಗೆ ಇಸ್ರೇಲ್ ಒಪ್ಪಲು ಕಾರಣಗಳೇನು?
--ಅಮೆರಿಕ ಅಧ್ಯಕ್ಷರಾಗಿರುವ ಜೋ ಬಿಡನ ಅವರ ಒತ್ತಡ.
--ಯುದ್ಧದ ಭೀತಿಯಿಂದಾಗಿ ಗಾಜಾ ಪಟ್ಟಿಯಲ್ಲಿರುವ ಸಮಾಸಗಳು ಹಾಗೂ ಅಲ್ಲಿನ ಸಾಮಾನ್ಯ ಪ್ರಶ್ನೆಗಳು ವೈದ್ಯಕೀಯ ಸೌಲಭ್ಯಗಳು, ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ ಈಜಿಪ್ಟ್ ಸೇರುವ ಸಂಭವ ಇರುವುದಾಗಿ ಈಜಿಪ್ಟಿನ ಸಂದಿಗ್ಧ ಪರಿಸ್ಥಿತಿ ಎದುರಾಗುವ ಸೂಚನೆ ಇದ್ದ ಈಜಿಪ್ಟ್ ನ ಅಧ್ಯಕ್ಷ Abdel Fattah Al-Sisi ಅವರು ಇಸ್ರೇಲ್ ನೊಂದಿಗೆ ಮಾತುಕತೆಯನ್ನು ನಡೆಸಿ ಕದನ ವಿರಾಮಕ್ಕೆ ಅನಿಗೊಳಿಸಿದ್ದಾರೆ.



*ಇದರಲ್ಲಿ ಗೆದ್ದವರು ಯಾರು, ಸೋತವರು ಯಾರು?
--ನೈಜತೆಯನ್ನು ನೋಡುವುದಾದರೆ ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವಿನ ಸಂಘರ್ಷ ಶಾಂತಿಯುತ ಒಪ್ಪಂದದೊಂದಿಗೆ ಕೊನೆಗೊಂಡಿದೆ. ಇಲ್ಲಿ ಎರಡೂ ಕಡೆಯಲ್ಲಿ ನಡೆದ ಹಾನಿಗಳನ್ನು ಗಮನಿಸಿದರೆ ಯಾವ ದೇಶವು ಹೆಚ್ಚಿನ ಹಾನಿಯನ್ನು ಮಾಡಿದೆ ಎಂದು ಗಮನಿಸಬಹುದು.





-- ಪ್ಯಾಲೆಸ್ತೇನಿನ ಗಾಜಾಪಟ್ಟಿಯ ಹಮಾಸ್ ಉಗ್ರರು ನಡೆಸಿರುವ ಆಕ್ರಮಣವನ್ನು ಗಮನಿಸಿದರೆ ಅವರು ಕೇವಲ ಇಸ್ರೇಲ್ನ ಆರ್ಥಿಕ ಪರಿಸ್ಥಿತಿಯನ್ನು ತೊಂದರೆಗೀಡು ಮಾಡುವ ಕುರಿತು ಕೇವಲ ರಾಕೆಟ್ ಗಳನ್ನು ಯುದ್ಧವಾಗಿ ಬಳಸಿ ದಾಳಿ ಮಾಡಿ 12 ಜನರ ಸಾವು ಸೇರಿದಂತೆ ಅನೇಕ ಜನರನ್ನು ಗಾಯಗಳಾಗಿ ಮಾಡಿದೆ ಅನೇಕ ಬಿಲ್ಡಿಂಗಳನ್ನು ಧ್ವಂಸ ಮಾಡಿದೆ.




-- ಯುದ್ಧಾನಂತರದ ಇಸ್ರೇಲ್ ಪ್ರಾಬಲ್ಯವನ್ನು ಗಮನಿಸುವುದಾದರೆ ಇಸ್ರೇಲ್ನ ಯುದ್ಧದಿಂದಾಗಿ 248 ಜನರು ಗಾಜಾ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಹಾಗೂ 1900 ಜನ ಗಾಯಾಳುಗಳಾಗಿದ್ದಾರೆ. ಇದರ ಜೊತೆಗೆ ಇನ್ನೂ ಕೆಲವು ದಶಕಗಳನ್ನು ತೆಗೆದುಕೊಂಡು ಸುಧಾರಿಸುವಂತೆ ಗಾಜಾ ಪಟ್ಟಿಯಲ್ಲಿರುವ ವ್ಯವಸ್ಥೆಯು ಪೂರ್ತಿಯಾಗಿ ಹಾಳಾಗಿ ಹೋಗಿದೆ. ಹಮಾಸ್ ಉಗ್ರರ ಅನೇಕ ಸುರಂಗಗಳು, ವಿದ್ಯುತ್ ವ್ಯವಸ್ಥೆ, ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಸಂಪನ್ಮೂಲಗಳು ಇಸ್ರೇಲ್ ನ ವೈಮಾನಿಕ ದಾಳಿಯಿಂದಾಗಿ ಪೂರ್ತಿಯಾಗಿ ಹಾಳಾಗಿವೆ. 






**ಯಾವ ಕಾರಣಕ್ಕಾಗಿ Al Aqs ಮಸೀದಿಯಲ್ಲಿ ಅರಬ್ಬರು ಮತ್ತು ಪ್ಯಾಲೆಸ್ಟೇನ್ನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು?

--ಇಸ್ರೇಲ್ ಪ್ಯಾಲೆಸ್ಟೀನಿನ ಮೇಲೆ ದಾಳಿ ಮಾಡಿದ ಪರಿಣಾಮ, ಹಿಟ್ಲರ್ ಯಹೂದಿಗಳ ಮೇಲೆ ಮಾಡಿರುವ ದಾಳಿಯಂತೆ ಸುಧಾರಿಸಲಾಗದಂತಹ ಪರಿಸ್ಥಿತಿಯನ್ನು ಉಂಟು ಮಾಡುವಂತಿದೆ.
ಇಸ್ರೇಲ್ ದಾಳಿಯಿಂದಾಗಿ ಪ್ಯಾಲೆಸ್ಟೇನಿನ ಎಲ್ಲಾ ಮೂಲಸೌಕರ್ಯಗಳು ಹಾಳಾದರೂ ಬದುಕುಳಿದಿದ್ದ ದೊಡ್ಡದು ಎಂಬುವಂತೆ ಪ್ಯಾಲೆಸ್ಟೇನ್ನರು ceasefire ನ ನಂತರ ಮತ್ತೆ Al Aqsa ಮಸೀದಿಯಲ್ಲಿ ಇಸ್ರೇಲ್ನ ವಿರುದ್ಧವಾಗಿ ಘೋಷಣೆಯನ್ನು ಮಾಡಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾಗ ದೊಂಬಿಯನ್ನು ಚದುರಿಸಲು ಇಸ್ರೇಲ್ ಮತ್ತೆ ಅಶ್ರುವಾಯುವನ್ನು ಪ್ರಯೋಗ ಮಾಡುವ ಪರಿಸ್ಥಿತಿ ಎದುರಾಯಿತು. ಅನೇಕ ಪ್ರಯತ್ನದಿಂದ ಮಾಡಿಕೊಂಡಿರುವ ceasefire ಕದನ ವಿರಾಮವನ್ನು ಗಾಳಿಗೆ ತೂರಿ ಮತ್ತೆ ಸಂಘರ್ಷಕ್ಕೆ ಅನಿಗೊಳಿಸಲಾಗುತ್ತಿದೆ. ಈ ಹಿಂದೆ ನಡೆದ ಕದನವಿರಾಮ ದಂತೆ ಇದು ಒಂದು ಹೆಸರಿಗೆ ಮಾತ್ರ ಕದನ ಆರಾಮಾಗಿ ಕಾಣುತ್ತಿದೆ ಆದರೆ ನೈಜತೆಯನ್ನು ಒಳಗೊಂಡಿಲ್ಲ.

Comments

Post a Comment

RECENT